ಕಲಬುರಗಿ : ಕಾಂಗ್ರೆಸ್ ಪಕ್ಷವು ಆರ್‌ಎಸ್‌ಎಸ್‌ನನ್ನ ಎಂದಿಗೂ ವಿಷಕಾರಿಯಾಗಿಯೇ ನೋಡುತ್ತಂದೆ ಕಲಬುರಗಿ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಟ್ವೀಟ್ ಮೂಲಕ ಆರ್‌ಎಸ್‌ಎಸ್ ವಿರುದ್ಧ ಕೆರಳಿಕೆಂಡವಾಗಿದ್ದಾರೆ.. ಆ24 ರಂದು ಮಧ್ಯಾನ 12 ಗಂಟೆಗೆ ತಮ್ಮ ಎಕ್ಸ್ ಖಾತೆಯಲ್ಲಿ ಟ್ವಿಟ್ ಮಾಡಿರೋ ಪ್ರಿಯಾಂಕ್ ಖರ್ಗೆ, ಜನಾಂಗೀಯ ದ್ವೇಷ, ವರ್ಣಾಶ್ರಮದ ಕ್ರೌರ್ಯಗಳನ್ನ ಒಳಗೊಂಡ ನಾಜಿವಾದ, ಮನುವಾದಗಳನ್ನೆ ನರನಾಡಿ, ರಕ್ತಗಳಲ್ಲಿ ಪ್ರವಾಹಿಸಿಕೊಂಡಿರೋ ಆರ್‌ಎಸ್‌ಎಸ್ ಎಂಬ ವಿಷಕಾರಿ ಸಂಘಟನೆಯನ್ನ ಕಾಂಗ್ರೆಸ್ ಪಕ್ಷವು ಎಂದಿಗೂ ಶತ್ರುವಾಗಿಯೇ ನೋಡುತ್ತ ಬಂದಿದ್ದು, ಮುಂದೆಯೂ ಶತ್ರುವಾಗಿಯೇ ನೋಡುತ್ತೆಯೆಂದು ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ.