ಜರ್ಮನಿಯ ಬಾನ್‌ನಲ್ಲಿ ನಡೆಯುತ್ತಿರುವ ಗ್ಲೋಬಲ್ ಚೇಂಜ್‌ಮೇಕರ್ ಅಕಾಡೆಮಿ ಫಾರ್ ಪಾರ್ಲಿಮೆಂಟೇರಿಯನ್ಸ್ (G-CAP) ಸಮಾವೇಶದಲ್ಲಿ ಸಂಸದ ಡಾ.ಕೆ.ಸುಧಾಕರ್ ಭಾಗವಹಿಸಿದ್ದಾರೆ. ಆಗಸ್ಟ್ 24 ರಿಂದ 29 ರವರೆಗೆ ನಡೆಯುತ್ತಿರುವ ಈ ಸಮಾವೇಶದಲ್ಲಿ, ಸೋಮವಾರ ಭೂ ರಕ್ಷಣೆ, ಬಂಜರು ಭೂಮಿ ತಡೆಗಟ್ಟುವಿಕೆ ಹಾಗೂ ಸುಸ್ಥಿರತೆ ಉಳಿಸುವ ಬಗ್ಗೆ ಹಾಗೂ ಈ ಕಾರ್ಯಗಳಲ್ಲಿ ಕಾನೂನು ರೂಪಿಸುವ ಪ್ರತಿನಿಧಿಗಳು ಹೇಗೆ ಪಾತ್ರ ನಿರ್ವಹಿಸಬಹುದು ಎಂಬುದರ ಬಗ್ಗೆ ಚರ್ಚೆ ನಡೆಯಿತು. ಚರ್ಚೆಯಲ್ಲಿ 30 ದೇಶಗಳ 30 ಸಂಸತ್ತು ಸದಸ್ಯರು ಭಾಗವಹಿಸಿದ್ದರು