ದಾಂಡೇಲಿ : ಗಣೇಶೋತ್ಸವ ಅಂದರೆ ಅದು ಸರ್ವಧರ್ಮೀಯರ ಹಬ್ಬ ಎನ್ನುವುದಕ್ಕೆ ದಾಂಡೇಲಿಯ ಗಾಂಧಿನಗರದ ಶ್ರೀ ಗಣೇಶ ಹಿಂದೂ - ಮುಸ್ಲಿಂ - ಕ್ರೈಸ್ತ ಯುವಕ ಮಂಡಳದ ಸಾರ್ವಜನಿಕ ಗಣೇಶೋತ್ಸವ ಪ್ರತ್ಯಕ್ಷ ಉದಾಹರಣೆ ಎನ್ನಬಹುದು. ಕಳೆದ 24 ವರ್ಷಗಳಿಂದ ನಗರದ ಗಾಂಧಿನಗರ ಮತ್ತು ವನಶ್ರೀ ನಗರ ಮಾರುತಿ ನಗರದ ಹಿಂದೂ -ಮುಸ್ಲಿಂ -ಕ್ರೈಸ್ತ ಧರ್ಮ ಬಾಂಧವರು ಸೇರಿ ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮವನ್ನು ಅತ್ಯಂತ ಶ್ರದ್ಧಾ ಭಕ್ತಿಯಿಂದ ಹಾಗೂ ಸಂಭ್ರಮ ಸಡಗರದಿಂದ ಆಚರಿಸಿಕೊಂಡು ಬರುತ್ತಿದ್ದಾರೆ. ಈ ವರ್ಷವೂ ಬುಧವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲಾಗಿದೆ.