ಚಾಮರಾಜನಗರದಲ್ಲಿ ಸುಸ್ಥಿರ ಭವಿಷ್ಯಕ್ಕಾಗಿ ನಡೆದ ಬೈಸಿಕಲ್ ಜಾಥಾ ಗಮನ ಸೆಳೆಯಿತು. ಜಿಲ್ಲಾ ಪೊಲೀಸ್, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ನಡೆದ ಸುಸ್ಥಿರ ಭವಿಷ್ಯಕ್ಕಾಗಿ ನಡೆದ ಬೈಸಿಕಲ್ ಜಾಥಾಯು ನಗರದ ಜಿಲ್ಲಾ ಸಶಸ್ತ್ರ ಪೊಲೀಸ್ ಕೇಂದ್ರ ಆವರಣದಿಂದ ಆರಂಭವಾದ ಬೈಸಿಕಲ್ ಜಾಥಾ ಜಿಲ್ಲಾಪೊಲೀಸ್ ಕವಾಯತ್ ಮೈದಾನದಲ್ಲಿ ಮುಕ್ತಾಯವಾಯಿತು.ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ. ಬಿ.ಟಿ ಕವಿತಾ ಹಸಿರುನಿಶಾನೆ ತೋರುವ ಮೂಲಕ ಚಾಲನೆ ನೀಡಿ ಮಾತನಾಡಿ, ಖೇಲೋ ಇಂಡಿಯಾ ಯೋಜನೆಯ ಫಿಟ್ ಇಂಡಿಯಾ ಉಪಕ್ರಮದ ವಿಶ್ವ ಬೈಸಿಕಲ್ ದಿನವನ್ನು ಆಚರಿಸಲಾಗುತ್ತಿದೆ ಎಂದರು