Download Now Banner

This browser does not support the video element.

ಮಂಗಳೂರು: ಪಕ್ಷಿಕೆರೆಯಲ್ಲಿ 26 ವರ್ಷಗಳ ಹಿಂದೆ ಕೋಮುಗಲಭೆಯಲ್ಲಿ ಭಾಗಿಯಾಗಿ ಬಳಿಕ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳ ಬಂಧನ

Mangaluru, Dakshina Kannada | Sep 9, 2025
ಸುಮಾರು 26 ವರ್ಷಗಳ ಹಿಂದೆ ಕೋಮುಗಲಭೆಯಲ್ಲಿ ಭಾಗಿಯಾಗಿ ಬಳಿಕ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಲೀಲಾಧರ್ ಹಾಗೂ ಚಂದ್ರಹಾಸ್ ಕೇಶವ ಶೆಟ್ಟಿ ಎಂದು ಗುರುತಿಸಲಾಗಿದೆ. 31-12-1998 ರಂದು ಮಂಗಳೂರು ಹೊರವಲಯದ ಮುಲ್ಕಿ ಠಾಣಾ ಸರಹದ್ದಿನ ಹಳೆಯಂಗಡಿಯಲ್ಲಿ ನಡೆದ ಕೋಮು ಗಲಭೆ, ಬೆಂಕಿ ಹಚ್ಚಿ ನಡೆಸಿದ ಗಲಾಟೆ ಹಿನ್ನೆಲೆಯಲ್ಲಿ ಮುಲ್ಕಿ ಪೊಲೀಸ್ ಠಾಣೆ ಅ. ಕ್ರ.𝟬𝟲/𝟭𝟵𝟵𝟵 ಕಲಂ 143, 147, 148, 436, 427 r/w 149 IPC ಪ್ರಕರಣದ ಆರೋಪಿಗಳಾದ ಲೀಲಾಧರ್ ಮತ್ತು ಚಂದ್ರಹಾಸ್ ಕೇಶವ ಶೆಟ್ಟಿ ರವರು ಘಟನೆ ನಡೆದಾಗಿನಿಂದ ಪೊಲೀಸರಿಗೆ ಸಿಗದೇ ಪರಾರಿಯಾಗಿದ್ದರು
Read More News
T & CPrivacy PolicyContact Us