ತಿಪಟೂರು ನಗರದಲ್ಲಿ ಗಣಪತಿ ವಿಸರ್ಜನಾ ಕಾರ್ಯಕ್ರಮ ಹಾಗೂ ಈದ್ ಮಿಲಾದ್ ಹಬ್ಬದ ಹಿನ್ನಲೆ ಶಾಂತಿ ಸಭೆ ನಡೆಸಲಾಯಿತು. ಗುರುವಾರ ಸಂಜೆ ಸುಮಾರು 5 ರ ಸಮಯದಲ್ಲಿ ಈ ಶಾಂತಿ ಸಭೆ ನಡೆಸಲಾಯಿತು. ಶಾಸಕ ಷಡಕ್ಷರಿ ಅಧ್ಯಕ್ಷತೆಯಲ್ಲಿ ಈ ಸಭೆ ಜರುಗಿತು. ಈ ಕಾರ್ಯಕ್ರಮದಲ್ಲಿ ಎರಡು ಕೋಮಿನ ಮುಖಂಡರು ಹಾಜರಿದ್ದರು. ಗಣೇಶ ಪೆಂಡಾಲ್ ನಲ್ಲಿ ನಡೆಯುವ ಕಾರ್ಯಕ್ರಮ ಹಾಗೂ ವಿಸರ್ಜನೆ ಮೆರವಣಿಗೆ ಈದ್ ಮಿಲಾದ್ ಆಚರಣೆ ಪೊಲೀಸ್ ಇಲಾಖಾ ಮೇಲ್ವಿಚಾರಣೆಯಲ್ಲಿ ನಡೆಯಬೇಕು. ಮೆರವಣಿಗೆ ಸಂದರ್ಭದಲ್ಲಿ ಶಾಂತಿಯುತವಾಗಿ ನಡೆದುಕೊಳ್ಳಬೇಕು ಎಂದು ಕಾನೂನು ಸುವ್ಯವಸ್ಥೆ ಬಗ್ಗೆ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಪುರುಷೋತ್ತಮ್ ತಿಳಿಸಿದರು.