ಚಾಮರಾಜನಗರ ತಾಲೂಕಿನ ಗಡಿಭಾಗವಾದ ಬಿಸಲವಾಡಿ ಸಮೀಪ ಇರುವ ಅರಳವಾಡಿ ಗ್ರಾಮಕ್ಕೆ ಒಂಟಿ ಸಲಗ ನುಗ್ಗಿದೆ. ಇನ್ನೂ ಒಂಟಿ ಆನೆಯನ್ನು ನೋಡಿ ಗ್ರಾಮಸ್ಥರು ಭಯಭೀತರಾಗಿದ್ದಾರೆ. ಆನೆಯನ್ನು ನೋಡಿ ಜನರು ಕಿರುಚಿಕೊಂಡು ಓಡಿ ಹೋದರು. ನಂತರ ಗ್ರಾಮಸ್ಥರು ಎಲ್ಲರೂ ಸೇರಿಕೊಂಡು ಕಿರುಚುತ್ತ ಕೂಗುತ್ತಾ ಆನೆಯನ್ನು ಕಾಡಿಗೆ ಓಡಿಸಿದರು. ಜನ ವಸತಿ ಪ್ರದೇಶದಲ್ಲಿ ಆನೆಯ ಚಲನವಲನ ಕಂಡು ಗ್ರಾಮಸ್ಥರು ಭಯಭೀತರಾಗಿದ್ದಾರೆ.