ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಕಾಡಾನೆಗಳ ಹಿಂಡು ಪ್ರತ್ಯಕ್ಷಗೊಂಡಿದ್ದು, ಆ ದೃಶ್ಯವನ್ನು ನೋಡಿದ ಪ್ರವಾಸಿಗರಲ್ಲಿ ಅಚ್ಚರಿ ಹಾಗೂ ಉತ್ಸಾಹ ಮೂಡಿಸಿದೆ. ಪ್ರಕೃತಿ ಸೌಂದರ್ಯವನ್ನು ನಿಜರೂಪದಲ್ಲಿ ಕಾಣಲು ಬೆಟ್ಟಕ್ಕೆ ಆಗಮಿಸಿದ್ದ ಪ್ರವಾಸಿಗರು, ದಿಡೀರ್ ಕಾಡಾನೆಗಳ ಗುಂಪನ್ನು ವೀಕ್ಷಿಸಿದ್ದಾರೆ. ಆಹಾರ ಹುಡುಕುತ್ತಾ ಸಾಗುತ್ತಿದ್ದ ಕಾಡಾನೆಗಳು, ಕೆಲ ಕಾಲ ಪ್ರವಾಸಿಗರ ಕಂಡು ನಿಂತಲ್ಲಿ ನಿಂತು ಅಚ್ಚರಿ ಮೂಡಿಸಿದವುಈ ಅಪರೂಪದ ಅನುಭವವನ್ನು ಸೆರೆಹಿಡಿಯಲು ಹಲವಾರು ಪ್ರವಾಸಿಗರು ತಮ್ಮ ಮೊಬೈಲ್ ಹಾಗೂ ಕ್ಯಾಮರಾದಲ್ಲಿ ವಿಡಿಯೋ ಹಿಡಿದಿದ್ದಾರೆ