ಗುಡಿಬಂಡೆ: ೨೦೨೫ನೇ ವರ್ಷದ ಒಳಗಡೆ ಗುಡಿಬಂಡೆ ತಾಲೂಕಿನ ಎಲ್ಲಾ ಹಳ್ಳಿ, ಪಟ್ಟಣ ಸೇರಿ ೧ಸಾವಿರ ಉಚಿತ ನಿವೇಶನಗಳನ್ನು ನೀಡುತ್ತೇನೆ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದರು.ತಾಲೂಕು ಪಂಚಾಯಿತಿ ಆವರಣದಲ್ಲಿ ನಡೆದ ಕೋರೇನಹಳ್ಳಿ ಗ್ರಾಮಸ್ಥರಿಗೆ ಖಾಲಿ ನಿವೇಶನಗಳ ಹಕ್ಕು ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಾಲೂಕಿನ ಕೊಂಡರೆಡ್ಡಿಹಳ್ಳಿ ಗ್ರಾಮಸ್ಥರಿಗೆ ಹಕ್ಕು ಪತ್ರ ವಿತರಣೆ ಮಾಡುವ ಕೋರೇನಹಳ್ಳಿ ಗ್ರಾಮಸ್ಥರು ಅಲ್ಲಿಗೆ ಬಂದು, ನಮಗೂ ಸಹ ಉಚಿತ ನಿವೇಶನಗಳನ್ನು ನೀಡಿ ಎಂದು ಬೇಡಿಕೆಯನ್ನು ಇಟ್ಟಿದ್ದರು, ಆ ಮನವಿಯನ್ನು ಪುರಸ್ಕರಿಸಿ, ಈಗ ಆ ಗ್ರಾಮದ ಸುಮಾರು ೨೬ ಮಂದಿ ಫಲಾನುಭವಿಗಳಿಗೆ ಉಚಿತ ನಿವೇಶನಗಳ ಹಕ್ಕು ಪತ್ರಗಳನ್ನು ವಿತರಣೆ ಮಾಡಿದ್ದೇನೆ ಎಂದರು. ಅಲ್ಲದೆ ಕಡೇಹಳ್ಳಿ ಗ್ರಾಮದಲ್ಲಿ ನಿವೇಶನ ಹಕ್ಕ