ಕೊಪ್ಪಳ ಜಿಲ್ಲಾ ಕೇಂದ್ರವಾದ ಕೊಪ್ಪಳ ನಗರ ಮತ್ತು ಜಿಲ್ಲೆಯಲ್ಲಿ ಗಣೇಶ್ ಚತುರ್ಥಿ ಹಬ್ಬ ಮತ್ತು ಈದ್ ಮಿಲಾದ್ ಹಬ್ಬ ಏಕಕಾಲಕ್ಕೆ ಬಂದಿದ್ದು ಹಬ್ಬದ ಸಂದರ್ಭಗಳಲ್ಲಿ ಯಾವುದೇ ರೀತಿಯ ಅಹಿತಿಕರ ಘಟನೆ ನಡೆಯದಂತೆ ,ಶಾಂತಿಯುತವಾಗಿ ಮತ್ತು ಸೌಹಾರ್ದತೆಯುತವಾಗಿ ಆಚರಿಸಲು ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಿ ಎರಡು ಹಬ್ಬಗಳನ್ನು ಸಂಭ್ರಮದಿಂದ ಆಚರಿಸಲು ಸಹಕಾರ ನೀಡಿ ಜಿಲ್ಲೆಯಲ್ಲಿ ಹಬ್ಬಗಳ ಯಶಸ್ವಿ ಆಚರಣೆಗೆ ಶ್ರಮಿಸಿ ಸೂಕ್ತ ಮಾರ್ಗದರ್ಶನ ನೀಡಿ ಸಹಕರಿಸಿದ ಪೋಲೀಸ್ ಇಲಾಖೆ ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ, ರಾಮ್, ಎಲ್, ಅರಸಿದ್ದಿ ಯವರಿಗೆ ಮತ್ತು ಹೆಚ್ಚುವರಿ ವರಿಷ್ಠಾಧಿಕಾರಿ ಹೇಮಂತ್ ಕುಮಾರ್ ರವರಿಗೆ ಕೊಪ್ಪಳದಲ್ಲಿ ಮುಸ್ಲಿಂ ಸಮುದಾಯದ ಮುಖಂಡರು ಸನ್ಮಾನ ಮಾಡಿದರು