ರಾಯಚೂರು ನಗರದಲ್ಲಿ 9ನೇ ದಿನದ ಗಣೇಶ ವಿಸರ್ಜನೆ ಸಂದರ್ಭದಲ್ಲಿ ನಡೆದ ಮೆರವಣಿಗೆಯಲ್ಲಿ ಇಬ್ಬರು ಯುವಕರು ಹಳೇ ದ್ವೇಷ ಹಿನ್ನೆಲೆ ಕಲ್ಲು ಎಸೆದಿದ್ದರಿಂದ ಇಬ್ಬರು ವ್ಯಕ್ತಿಗಳು ಗಾಯಗೊಂಡಿರುವ ಘಟನೆ ಗುರುವಾರ ಸಂಜೆ ನಡೆದಿದೆ. ಕಿಡಿಗೇಡಿ ಯುವಕರಾದ ಪ್ರಶಾಂತ್ ಮತ್ತು ಪ್ರವೀಣ್ ಎನ್ನುವರು ವಿನಯ್ ಕುಮಾರ್ ಮತ್ತು ಗಣೇಶ ಎಂಬುವರ ಮೇಲೆ ಗಂಗಾ ನಗರ ನಿವಾಸ ರಸ್ತೆಯಲ್ಲಿ ನಡೆದ ಮೆರವಣಿಗೆ ವೇಳೆ ಕಟ್ಟಡದ ಮೇಲೆ ನಿಂತು ಕಲ್ಲು ಎಸೆದಿದ್ದರಿಂದ ಇಬ್ಬರು ಗಾಯಗೊಂಡಿದ್ದರು. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಸದರ ಬಜಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಕಲ್ಲು ಎಸೆದವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಲಾಗಿದೆ.ಕಲ್ಲು ಎಸೆದಿರುವ ವಿಡಿಯೋ ತಡವಾಗಿ ಬೆಳಕಿಗೆ ಬಂದು ಎಲ್ಲೆಡೆ ವೈರಲ್ ಆಗಿದೆ.