ಹಿಂದೂ ಮಹಾಗಣಪತಿ ವಿಸರ್ಜನೆ: ಅದ್ದೂರಿ ಶೋಭಾಯಾತ್ರೆ ಹಿಂದೂ ಮಹಾಗಣಪತಿ ಉತ್ಸವ ಸಮಿತಿ ಹಾಗೂ ಭಜರಂಗದಳ ಆಶ್ರಯದಲ್ಲಿ ನಗರದಲ್ಲಿ ಜೈ ಭವಾನಿ ದೇವಸ್ಥಾನದ ಹತ್ತಿರ ಸ್ಥಾಪಿಸಿದ್ದ ಮಹಾ ಗಣಪತಿ ವಿಸರ್ಜನೆ ಕಾರ್ಯಕ್ರಮದಲ್ಲಿ ಶನಿವಾರ ಅದ್ದೂರಿ ಶೋಭಾಯಾತ್ರೆ ನಡೆಯಿತು. ಮೆರವಣಿಗೆಯುದ್ದಕ್ಕೂ ರಾಮ-ಲಕ್ಷ್ಮಣ, ಆಂಜನೇಯ, ಕನ್ನಡಾಂಭೆ ಭಾವಚಿತ್ರ, ಛತ್ರಪತಿ ಶಿವಾಜಿ ಪ್ರತಿಮೆ, ವಿವಿಧ ಸ್ಥಬ್ಧ ಚಿತ್ರಗಳು ಗಮನ ಸೆಳೆದವು. ಡಿಜೆ ಹಾಡುಗಳಿಗೆ ಯುವಕರು ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು. ಪದವಿ ಕಾಲೇಜು, ನೇತಾಜಿ ವೃತ್ತ, ಶಾಸ್ತ್ರೀ ವೃತ್ತ, ಡಾ.ಬಿ.ಅಂಬೇಡ್ಕರ್ ವೃತ್ತ, ವೀರಶೈವಕಲ್ಯಾಣ ಮಂಟಪ, ಗಾಂಧಿ