ಸಾಲಬಾಧೆ ತಾಳಲಾರದೇ ರೈತರೊಬ್ಬರು ಜಮೀನಿನಲ್ಲಿ ವಿಷ ಸೇವಿಸಿ ಅತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ನಾಗಲಾಪುರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ವೀರಪ್ಪ ಸಂಕಣ್ಣನವರ್ (70) ಮೃತ ರೈತ. ಈತ ಕೃಷಿ ಕೆಲಸಕ್ಕೆಂದು ವಿವಿಧ ಬ್ಯಾಂಕು ಹಾಗೂ ಖಾಸಗಿಯವರ ಬಳಿ 8 ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದಾರೆ. ಬೆಳೆಗಳು ಸರಿಯಾಗಿ ಬಾರದ ಹಿನ್ನೆಲೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಎಫ್ಐಆರ್ ನಲ್ಲಿ ತಿಳಿಸಿದೆ.