ಚಿಕ್ಕ ಉಪ್ಪೇರಿ ಗ್ರಾಮದ ನಾರಾಯಣಪುರ ಬಲದಂಡೆ ಕಾಲುವೆ ಗೆ ವ್ಯಕ್ತಿಯೊರ್ವ ಬಿದ್ದ ಘಟನೆ ಸ.2 ರ ಸಂಜೆ ನಡೆದಿದ್ದು, ಸ್ಥಳಕ್ಕೆ ಅಗ್ನಿ ಶಾಮಕ ದಳದ ಅಧಿಕಾರಿಗಳು ಭೇಟಿ ನೀಡಿ ಬುಧವಾರ ದಂದು ಕಾಲುವೆಯಲ್ಲಿ ಸತತ 5 ತಾಸುಗಳ ಶೋಧದ ನಂತರ ಕಾಲುವೆಗೆ ಬಿದ್ದ ವ್ಯಕ್ತಿ ಶವವಾಗಿ ಪತ್ತೆಯಾಗಿದ್ದಾನೆ. ಕಾಲುವೆ ಗೆ ಬಿದ್ದ ವ್ಯಕ್ತಿ ಚಿಕ್ಕ ಉಪ್ಪೇರಿ ಗ್ರಾಮದ ಈರಪ್ಪ ಭಂಗಿ (38) ಎಂದು ಗುರುತಿಸಲಾಗಿದ್ದು,ಮೃತ ವ್ಯಕ್ತಿ 108 ವಾಹನದ ಚಾಲಕ ನಾಗಿದ್ದ ಎಂದು ಸ್ಥಳೀಯರಿಂದ ತಿಳಿದು ಬಂದಿದ್ದು, ಕಾಲುವೆ ಗೆ ಬಿದ್ದ ಘಟನಾ ಸ್ಥಳ ಲಿಂಗಸುಗೂರು ಪೊಲೀಸ್ ಠಾಣೆ ವ್ಯಾಪ್ತಿಗೆ ಒಳಪಟ್ಟಿದ್ದು, ಪೊಲೀಸ್ ತನಿಖೆಯ ನಂತರ ಕಾಲುವೆ ಗೆ ಬಿದ್ದ ಘಟನೆಯ ಸತ್ಯಾತತೆ ತಿಳಿದು ಬರಬೇಕಿದೆ. ಶೋಧ ಕಾರ್ಯದಲ್ಲಿ ,ಸಹಾಯಕ ಅಗ್ನಿ ಶಾಮಕ ಠಾಣಾಧಿಕಾರಿ ವಿರಯ್ಯ