*(ನಾಳೆ ಮಾಧ್ಯಮ ಪ್ರಕಟಣೆಯ ಕೃಪೆಗಾಗಿ)* ತೂಬಗೆರೆಯಲ್ಲಿ ಐತಿಹಾಸಿಕ ಆನೆ ಅಂಬಾರಿ ಮೆರವಣಿಗೆ – ಇಂದು ಭವ್ಯ ವಿಸರ್ಜನದೊಡ್ಡಬಳ್ಳಾಪುರ : ತಾಲ್ಲೂಕಿನ ತೂಬಗೆರೆಯಲ್ಲಿ ಈ ಬಾರಿ ಗಣೇಶೋತ್ಸವವು ವಿಶಿಷ್ಟವಾಗಿ ನಡೆಯುತ್ತಿದೆ. ತೂಬಗೆರೆ ಚಾವಡಿ ಗಣೇಶೋತ್ಸವ ಸಮಿತಿಯವರು ಮೊದಲ ಬಾರಿಗೆ ತೂಬಗೆರೆಯ ಇತಿಹಾಸದಲ್ಲೇ ದಸರಾ ಮಾದರಿ ಆನೆ ಅಂಬಾರಿ ಮೆರವಣಿಗೆಯನ್ನು ಆಯೋಜಿಸಿದ್ದು, ಇದು ಊರಿನ ಸಾಂಸ್ಕೃತಿಕ ಇತಿಹಾಸದಲ್ಲಿ ಸ್ಮರಣೀಯ ಕ್ಷಣವಾಗಲಿದೆ ಎಂದು ಸಮಿತಿಯ ಅಧ್ಯಕ್ಷ ಮಧು ತಿಳಿಸಿದ್ದಾರೆ.