ಮೊಳಕಾಲ್ಮುರು:-ಕೃಷಿ ಇಲಾಖೆ ಸೂಚಿಸುವ ಮಾರ್ಗದರ್ಶನ ಪಾಲಿಸುವ ಮೂಲಕ ಕೃಷಿ ಮಾಡಿದಲ್ಲಿ ಉತ್ತಮ ಬೆಳೆ, ಬೆಲೆ ಪಡೆಯಲು ಸಾಧ್ಯವಾಗಲಿದೆ. ಈ ಮೂಲಕ ರೈತರು ಇಲಾಖೆ ಜತೆ ಕೈಜೋಡಿಸಬೇಕು ಎಂದು ಕೃಷಿ ವಿಜ್ಞಾನಿ ಡಾ. ಓಂಕಾರಪ್ಪ ಹೇಳಿದರು. ತಾಲ್ಲೂಕಿನ ಕೊಂಡ್ಲಹಳ್ಳಿಯ ಬಿಳಿನೀರು ಚಿಲುಮೆ ರೈತ ಉತ್ಪಾದಕ ಮತ್ತು ಮಾರಾಟ ಸಹಕಾರ ಸಂಘ ಆವರಣದಲ್ಲಿ ಮಂಗಳವಾರ ಕೃಷಿ ಇಲಾಖೆಯು ' ರಾಷ್ಟ್ರೀಯ ಖಾದ್ಯತೈಲ, ಎಣ್ಣೆಕಾಳು ಮೌಲ್ಯ, ಸರಪಳಿ ಮಚ್ಛಗಳ ಕಾರ್ಯಕ್ರಮ. ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.