ತೀರ್ಥಹಳ್ಳಿ ತಾಲೂಕಿನ ಬೆಜ್ಜುವಳ್ಳಿಯ ಅರುಣ್ ಎಂಬುವವರ ಪತ್ನಿ 24 ವರ್ಷದ ಪವಿತ್ರ ಎಂಬ ಮಹಿಳೆ ಬೆಜ್ಜುವಳ್ಳಿಯ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದು 2025 ಏಪ್ರಿಲ್ 4ರಂದು ಎಂದಿನಂತೆ ಕೆಲಸಕ್ಕೆ ಎಂದು ಹೋದ ಮಹಿಳೆ ಮನೆಗೆ ಇದುವರೆಗೂ ವಾಪಸ್ ಆಗಿರುವುದಿಲ್ಲ. ಸಂಬಂಧಿಕರು ಹಾಗೂ ಸ್ನೇಹಿತರ ಬಳಿ ವಿಚಾರಿಸಿದರೂ ಸುಳಿವು ಸಿಕ್ಕಿಲ್ಲ. ಈಕೆಯ ಬಗ್ಗೆ ಮಾಹಿತಿ ಸಿಕ್ಕಲ್ಲಿ ಕೂಡಲೇ ಪೊಲೀಸರಿಗೆ ತಿಳಿಸುವಂತೆ ಸೋಮವಾರ ಪ್ರಕಟಣೆ ಮೂಲಕ ಅಧಿಕಾರಿಗಳು ತಿಳಿಸಿರುತ್ತಾರೆ. ಕಾಣೆಯಾದ ಮಹಿಳೆಯ ಚಹರೆ 4ಅಡಿ ಎತ್ತರ,ದುಂಡು ಮುಖ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟನ್ನ ಹೊಂದಿರುತ್ತಾರೆ. ಈಕೆಯ ಬಗ್ಗೆ ಸುಳಿವು ಸಿಕ್ಕಲ್ಲಿ ಕೂಡಲೇ ಮಾಳೂರು ಪೊಲೀಸ್ ಠಾಣೆಯನ್ನ ಸಂಪರ್ಕಿಸುವಂತೆ ತಿಳಿಸಲಾಗಿದೆ.