ರಾಯಚೂರು ನಗರದ ರಾಯಚೂರು ಕೃಷಿ ವಿಶ್ವ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ಕೃಷಿ ಬೆಲೆ ಆಯೋಗದ ರಾಜ್ಯಾಧ್ಯಕ್ಷ ಅಶೋಕ ದಳವಾಯಿ ಅವರ ಅಧ್ಯಕ್ಷತೆಯಲ್ಲಿ ರೈತರ ಬೆಂಬಲ ಬೆಲೆ ಕುರಿತು ಡಾ. ಸ್ವಾಮಿನಾಥನ್ ಆಯೋಗದ ವರದಿ ಜಾರಿಗೆ ಹಾಗೂ ರೈತರ ಆತ್ಮಹತ್ಯೆ ಕುರಿತು ಸಮಾಲೋಚನ ಸಭೆ ನಡೆಸಲಾಯಿತು. ಶನಿವಾರ ಸಾಯಂಕಾಲದವರೆಗೂ ನಡೆದ ಸಭೆಯಲ್ಲಿ ಕೃಷಿ ಬೆಲೆ ಆಯೋಗದ ಸದಸ್ಯರಾದ ಡಿ ಎಚ್ ಪೂಜಾರ ಹನುಮಂತಪ್ಪ ವಿಜ್ಞಾನಿಗಳಾದ ಲೋಕೇಶ್ ಅಮೃತ ಸೇರಿದಂತೆ ಹಲವು ವಿಜ್ಞಾನಿಗಳ ಜೊತೆ ರೈತರ ಆತ್ಮಹತ್ಯೆ ಕುರಿತು ಚರ್ಚಿಸಲಾಯಿತು.