ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಯ ಬಾಗಿಲನ್ನ ಹೊಡೆದು ಬೀರುವಿನ ಬಾಗಿಲನ್ನ ಮುರಿದು ಚಿನ್ನಾಭರಣ ನಗದು ಹಣವನ್ನು ಕಳವು ಮಾಡಲಾಗಿದೆ. ಬಿಡದಿ ಪೋಲಿಸ್ ಠಾಣೆಯ ಬನ್ನಗಿರಿ ಗ್ರಾಮದಲ್ಲಿ ಘಟನೆ ನಡೆದಿದೆ. ಚಂದ್ರಶೇಖರ್ ಅವರಿಗೆ ಸೇರಿದಂತಹ ಮನೆಯಲ್ಲಿ ಕಳವು ಮಾಡಲಾಗಿದೆ. ಚಿನ್ನಾಭರಣ ನಗದು ಹಣ ಜೊತೆಗೆ ಸಿ ಸಿ ಟಿ ವಿಯ ಡಿವಿಆರ್ ಗಳನ್ನ ಕದ್ದು ಪರಾರಿಯಾಗಿದ್ದಾರೆ. ಈ ಸಂಬಂಧ ಬಿಡದಿ ಪೊಲೀಸ್ ಠಾಣೆಯಲ್ಲಿ ಶನಿವಾರ ಪ್ರಕರಣ ದಾಖಲು ಮಾಡಲಾಗಿದೆ.