ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ವಿವಿಧ ಗ್ರಾಮಗಳಿಗೆ ಶಾಸಕ ಹಂಪನಗೌಡ ಬಾದರ್ಲಿ ಭೇಟಿ ನೀಡಿ ಮಹಾಮಳೆಯಿಂದ ಬೆಳೆ ಹಾನಿ ವೀಕ್ಷಣೆ ಮಾಡಿದ್ದಾರೆ. ರೈತರ ಜಮೀನುಗಳಿಗೆ ಭೇಟಿ ನೀಡಿ ಬೆಳೆ ಹಾನಿ ವೀಕ್ಷಣೆ ಮಾಡಿ ನಂತರ ಅಧಿಕಾರಿಗಳಿಗೆ ಸರಿಯಾದ ಸಮೀಕ್ಷೆಯನ್ನು ಮಾಡಿ ವರದಿ ಸಲ್ಲಿಸಲು ಸೂಚನೆಯನ್ನು ನೀಡಿದ್ದಾರೆ. ಈ ಸಂದರ್ಭದಲ್ಲಿ ತಹಸಿಲ್ದಾರ್ ಅರುಣ ದೇಸಾಯಿ ಅವರು ಕೂಡ ಭಾಗವಹಿಸಿ ಶಾಸಕರಿಗೆ ಮಾಹಿತಿಯನ್ನು ನೀಡಿದರು. ಅನೇಕ ಜನ ರೈತರು ಕೂಡ ಭಾಗವಹಿಸಿದ್ದರು.