Download Now Banner

This browser does not support the video element.

ಸೂಪಾ: ಪಣಸೋಲಿ ಆನೆ ಶಿಬಿರದ ಮರಿಯಾನೆ ಗೌರಿ ಇನ್ನಿಲ್ಲ, ವನ್ಯಜೀವಿ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಅಂತ್ಯಸಂಸ್ಕಾರ

Supa, Uttara Kannada | Sep 25, 2025
ಜೋಯಿಡಾ : ಪ್ರವಾಸಿಗರ ಆಕರ್ಷಣೆಗೆ ಪಾತ್ರವಾಗಿದ್ದ ಜೋಡಿ ತಾಲೂಕಿನ ಪಣಸೋಲಿ ವನ್ಯಜೀವಿ ವಲಯದ ಆನೆ ಶಿಬಿರದಲ್ಲಿದ್ದ ಮುದ್ದು ಮುದ್ದಾದ ಗೌರಿ ಹೆಸರಿನ ಹೆಣ್ಣು ಮರಿ ಆನೆಯು ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲಿ, ಚಿಕಿತ್ಸೆ ಫಲಕಾರಿಯಾಗದೆ ಇಂದು ಗುರುವಾರ ಬೆಳಿಗ್ಗೆ 6:00 ಸುಮಾರಿಗೆ ಮೃತಪಟ್ಟಿರುವ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ಲಭ್ಯವಾಗಿದೆ. ಎರಡು ವರ್ಷ ಒಂಬತ್ತು ತಿಂಗಳು ವಯಸ್ಸಿನ ಗೌರಿ ಎಲ್ಲರ ಮುದ್ದಿನ ಮರಿಯಾನೆಯಾಗಿತ್ತು. ಗೌರಿಯನ್ನು ನೋಡಲೆಂದ ೇ ಪ್ರವಾಸಿಗರು ಅತಿಹೆಚ್ಚಿನ ಸಂಖ್ಯೆಯಲ್ಲಿ ಆನೆ ಶಿಬಿರಕ್ಕೆ ಬರುತ್ತಿದ್ದರು. ಗೌರಿಯ ಓಡಾಟವನ್ನು ನೋಡುವುದೇ ಒಂದು ಸಂಭ್ರಮವಾಗಿತ್ತು. ಗೌರಿಯ ಮಕ್ಕಳಾಟ ಇನ್ನು ನೆನಪು ಮಾತ್ರ.
Read More News
T & CPrivacy PolicyContact Us