ಮದ್ದೂರು ತಾಲ್ಲೂಕು ಮೆಳ್ಳಹಳ್ಳಿಯಲ್ಲಿ ಕನಕ ಭವನ ಖಾಲಿ ನಿವೇಶನದ ಕಾಂಪೌಂಡ್ ನಿರ್ಮಾಣ ಕಾಮಗಾರಿಗೆ ಶಾಸಕ ಮಧುಜಿಮಾದೇಗೌಡ ಗುದ್ದಲಿ ಪೂಜೆ ನೆರವೇರಿಸಿದರು. ನಂತರ ಶಾಸಕ ಮಧುಜಿಮಾದೇಗೌಡ ಅವರು ಮಾತನಾಡಿ, ಚುನಾವಣೆ ಬಂದಾಗ ಯಾರ ಶಕ್ತಿ ಎಷ್ಟಿದೆ, ಯಾರು ಬಲಿಷ್ಟರು ಎಂಬುವುದನ್ನು ತೋರಿಸುವ ಕಾಲ ಬರುತ್ತದೆ ಎಂದು ವಿರೋಧಿಗಳಿಗೆ ಪರೋಕ್ಷವಾಗಿ ಗುಡುಗಿದರು. ಶಕ್ತಿ ಪ್ರದರ್ಶನ, ರಾಜಕೀಯವನ್ನು ಚುನಾವಣೆ ಸಮಯದಲ್ಲಿ ಮಾಡಬೇಕೇ ಹೊರತು ಉಳಿದ ಸಮಯದಲ್ಲಿ ಅಭಿವೃದ್ದಿ ಮಾಡಲು ಪ್ರಯತ್ನಿಸುವುದು ರಾಜಕಾರಣಿಗಳ ಲಕ್ಷಣವಾಗಿದೆ. ನಮ್ಮ ರಾಜಕೀಯವೆನಿದ್ದರೂ ಚುನಾವಣೆಯ ಸಮಯದಲ್ಲಿ. ಈಗ ಕೇವಲ ಅಭಿವೃದ್ದಿಯ ಮಂತ್ರವಷ್ಟೆ ಎಂದರು.