ಚಿಕ್ಕನಾಯಕನಹಳ್ಳಿ ತಾಲೂಕಿನ ಹಂದನಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವ್ಯಕ್ತಿಯೋರ್ವ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿರುವ ಘಟನೆ ನಡೆದಿದೆ. ಆ.30 ರಂದು ಬೆಳಿಗ್ಗೆ 6.45ಕ್ಕೆ ಕಾಲೇಜಿಗೆ ಹೋದ ಬಾಲಕಿ ಸಂಜೆ ಮನೆಗೆ ವಾಪಸ್ಸಾಗಲಿಲ್ಲ. ಕುಟುಂಬಸ್ಥರು ಎಲ್ಲೆಡೆ ಹುಡುಕಿದರೂ ಪತ್ತೆಯಾಗದೆ, ಆ.31ರಂದು ಮಧ್ಯಾಹ್ನ ಹಂದನಕೆರೆ ಠಾಣೆಗೆ ದೂರು ನೀಡಲು ಬಂದಾಗ ಆಕೆ ಮನೆಗೆ ಮರಳಿದಳು. ವಿಚಾರಿಸಲಾಗಿ ಬಾಲಕಿ ನೀಡಿದ ಹೇಳಿಕೆಯ ಪ್ರಕಾರ, ಆ.30 ರಂದು ಬೆಳಿಗ್ಗೆ 8.01ಕ್ಕೆ ಚಿಕ್ಕನಾಯಕನಹಳ್ಳಿ ಬಸ್ ನಿಲ್ದಾಣದಲ್ಲಿ ಇದ್ದಾಗ, ಚೌಳಕಟ್ಟೆ ಗ್ರಾಮದ ದರ್ಶನ್ ಎಂಬಾತ ಬಲವಂತವಾಗಿ ಕರೆದುಕೊಂಡು ಹೋಗಿ ತನ್ನ ಅಣ್ಣನ ಮನೆಯಲ್ಲಿ ಬಾಲಕಿ ಮೇಲೆ ಅತ್ಯಾಚಾರ ಮಾಡಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.