ಚಾಮರಾಜನಗರದ ಜಿಲ್ಲಾಸ್ಪತ್ರೆಯ ಬಳಿ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿ ಲಾರಿಯಿಂದ ಭಾರಿ ಗಾತ್ರದ ಕಬ್ಬಿನ ಕಂತೆ ಬಿದ್ದಿದೆ. ರಾಮಸಮುದ್ರ ಕಡೆಯಿಂದ ಬಂದ ಕಬ್ಬಿನ ಲಾರಿ ಆಸ್ಪತ್ರೆ ಮುಂದೆ ಇರುವ ಹಮ್ಸ್ ಹತ್ತುವ ವೇಳೆ ಹೆಚ್ಚಾಗಿ ತುಂಬಿದ ಕಬ್ಬಿನ ಕಂತೆಗಳು ರಸ್ತೆಗೆ ಬಿದ್ದಿದೆ. ಇನ್ನೂ ಲಾರಿಯಿಂದ ಬರುತ್ತಿದ್ದ ಬೈಕ್ ಸವಾರರು ಪಾರಾಗಿದ್ದಾರೆ. ಇನ್ನೂ ಕಬ್ಬು ರಸ್ತೆ ಮೇಲೆ ಬಿದ್ದಿದ್ದರಿಂದ ಜನರು ಕಬ್ಬಿಗಾಗಿ ಮುಗಿಬಿದ್ದ ಘಟನೆ ನಡೆಯಿತು. ಇನ್ನೂ ಸ್ಥಳಕ್ಕೆ ಸಂಚಾರಿ ಪೊಲೀಸರು ಆಗಮಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.