ತುಮಕೂರು ನಗರದ ಭದ್ರಮ್ಮ ಚೌಟ್ರಿ ಎದುರು ವಿಶ್ವ ಹಿಂದೂ ಪರಿಷದ್ ಬಜರಂಗದಳ ವತಿಯಿಂದ ಪ್ರತಿಷ್ಠಾಪಿಸಿರುವ ಸೋಮೆಕಟ್ಟೆ ಹಿಂದೂ ಮಹಾಗಣಪತಿಯ ವಿಶೇಷ ಪೂಜಾ ಕಾರ್ಯಕ್ರಮವು ಪತ್ರಕರ್ತರ ಸಮೂಹದಿಂದ ನಡೆಯಿತು. ಮಂಗಳವಾರ ರಾತ್ರಿ 8:30 ಸಮಯದಲ್ಲಿ ಈ ಪೂಜಾ ಕಾರ್ಯಕ್ರಮ ನಡೆಯಿತು.ಮಹಾಮಂಗಳಾರತಿ ಬಳಿಕ ಈ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಪತ್ರಕರ್ತರ ಸಂಘದ ಅಧ್ಯಕ್ಷ ಚಿ. ನಿ. ಪುರುಷೋತ್ತಮ್ ವಿಶ್ವ ಹಿಂದೂ ಪರಿಷತ್ ಬಜರಂಗದಳ ಹೊರತಂದಿರುವ ಹಿಂದೂ ಮಹಾಗಣಪತಿ ಬಿತ್ತಿ ಪತ್ರವನ್ನ ಬಿಡುಗಡೆ ಮಾಡಿದರು.ಹಿರಿಯ ಪತ್ರಕರ್ತರಾದ ಮಾರುತಿ ಪ್ರಸಾದ್, ನಾಗರಾಜ್ ಹಾಗೂ ಚಾಂದ್, ಮಧು,ಶಂಕರ್ ಹೇಮಂತ್, ಸಿದ್ದಗಂಗಾ ಆಸ್ಪತ್ರೆಯ ಡಾ. ಪರಮೇಶ್ ಇದ್ದರು.