ಚಾಮರಾಜನಗರ ತಾಲೂಕಿನ ಗಡಿಭಾಗವಾದ ಪುಣಜನೂರು ಹಾಗೂ ಅಸನೂರು ರಾಷ್ಟ್ರೀಯ ಹೆದ್ದಾರಿಯ ಗಡಿಯಲ್ಲಿ ಒಂಟಿ ಸಲಗ ಒಂದು ವಾಹನವನ್ನು ಹಿಮ್ಮೆಟ್ಟಿಸಿದ ಘಟನೆ ನಡೆದಿದೆ. ಆಹಾರಕ್ಕಾಗಿ ಕಾಡಾನೆಗಳು ದಿನ ನಿತ್ಯ ವಾಹನಗಳಿಗೆ ಅಡ್ಡ ಹಾಕಿ ಆಹಾರವನ್ನು ತಿಂದು ರಸ್ತೆ ಬದಿಗೆ ಹೋಗುತ್ತಿದೆ. ಹೆದ್ದಾರಿಯಲ್ಲಿ ಬರುವ ಪ್ರತಿಯೊಂದು ವಾಹನಗಳನ್ನು ಕಾಡಾನೆ ತಪಾಸಣೆ ಮಾಡಿ ಮುಂದೆ ಬಿಡುತ್ತದೆ. ಇಲ್ಲೊಂದು ಕಾಡಾನೆಯೊಂದು ವಾಹನವನ್ನು ಹಿಂದಕ್ಕೆ ಕಳುಹಿಸುವ ತನಕ ಬಿಡಲಿಲ್ಲ. ಇನ್ನೂ ಒಂಟಿ ಸಲಗದಿಂದ ವಾಹನ ಸವಾರರು ಪಾರಾಗಿದ್ದಾರೆ.