ವಿವಿಧ ಕಡೆಗಳಲ್ಲಿ ಪ್ರತಿಷ್ಠಾಪನೆ ಮಾಡಲಾಗಿದ್ದ ಸಾರ್ವಜನಿಕ ಗಣಪತಿ ಮೂರ್ತಿಗಳನ್ನು ನಗರದ ಸಮುದ್ರದಲ್ಲಿ ಶನಿವಾರ ರಾತ್ರಿ 9ರವರೆಗೆ ಮೆರವಣಿಗೆ ಮೂಲಕ ಒಯ್ಯುವ ಮೂಲಕ ಸಮುದ್ರದಲ್ಲಿ ವಿಸರ್ಜನೆ ಮಾಡಲಾಯಿತು. ನಗರದಲ್ಲಿ 11 ದಿನಕ್ಕೆ ಎಲ್ಲ ಸಾರ್ವಜನಿಕ ಗಣಪತಿಗಳನ್ನು ವಿಸರ್ಜಿಸಲಾಗುತ್ತದೆ. ನಗರದ ಮಾರುತಿ ಗಲ್ಲಿ, ಶಿರವಾಡ, ಕೋಡಿಭಾಗ, ನಂದನಗದ್ದಾ, ರಿಕ್ಷಾ ಚಾಲಕ ಮಾಲಕರ ಸಂಘ, ಹರಿದೇವನಗರ ಸೇರಿದಂತೆ ವಿವಿಧ ಗಣೇಶೋತ್ಸವ ಸಮತಿಯವರು ಪ್ರತಿಷ್ಠಾಪನೆ ಮಾಡಿದ್ದ ಗಣೇಶನ ಬೃಹತ್ ಮೂರ್ತಿಗಳನ್ನು ಸಮುದ್ರದಲ್ಲಿ ವಿಸರ್ಜನೆ ಮಾಡಲಾಯಿತು.