ತಾಲ್ಲೂಕಿನ ಗೌರಸಮುದ್ರ ಸಮೀಪ ತುಮ್ಮಲು ಪ್ರದೇಶದಲ್ಲಿ ಅ.26 ರಂದು ನಡೆಯುವ ಶ್ರೀಗೌರಸಮುದ್ರ ಮಾರಮ್ಮ ದೇವಿ ಜಾತ್ರೆ ಸ್ಥಳಕ್ಕೆ ಗುರುವಾರ ತಾಪಂ ಇಓ ಶಶಿಧರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜಾತ್ರಾ ಮಹೋತ್ಸವ ರಾಜ್ಯದ ವಿವಿಧ ಜಿಲ್ಲೆಗಳಿಂದ ಹಾಗು ಆಂದ್ರ ಪ್ರದೇಶದಿಂದ ಅಪಾರ ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸುತ್ತಿರುವುದರಿಂದ ಜಾತ್ರೆಯ ಪೂರ್ವ ಸಿದ್ದತೆ ಕುರಿತು ತಾಪಂ ಇಒ ಶಶಿಧರ್ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಗ್ರಾಪಂ ಅಧ್ಯಕ್ಷ ಓಬಣ್ಣ, ಸದಸ್ಯ ಶಶಿಕುಮಾರ್ ಇದ್ದರು.