ಕಡೂರು ಮಂಗಳೂರು ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 173 ರ ಚಾರ್ಮಾಡಿ ಘಾಟ್ ನಲ್ಲಿ ಪದೇ ಪದೇ ಕಾಣಿಸಿಕೊಂಡು ಆತಂಕ ಉಂಟುಮಾಡುವ ಒಂಟಿ ಸಲಗ ಬೈರ ಇಂದು ಮತ್ತೆ ಕಾಣಿಸಿಕೊಂಡಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರ ಸಮೀಪ ಚಾರ್ಮಾಡಿ ಘಾಟ್ ನಲ್ಲಿ ಶನಿವಾರ ಸಂಜೆ ಒಂಟಿ ಸಲಗ ಭೈರ ಮತ್ತೆ ಕಾಣಿಸಿಕೊಂಡಿದ್ದು ವಾಹನ ಸವಾರರಲ್ಲಿ ಆತಂಕ ಉಂಟಾಗಿದೆ. ರಸ್ತೆಯಲ್ಲಿ ಕೆಲಕಾಲ ಭೈರ ಅಡ್ಡ ನಿಂತಿದ್ದರಿಂದ ವಾಹನ ಸವಾರರು ನಿಂತಲ್ಲೇ ನಿಂತಿದ್ದು, ಗಂಟೆಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿತ್ತು.