ರಾಯಚೂರು ನಗರದಲ್ಲಿರುವ ರಿಮ್ಸ್ ಆಸ್ಪತ್ರೆಯಲ್ಲಿ ಮಂಗಗಳ ಹಾವಳಿ ಹೆಚ್ಚಾಗಿದ್ದು ರೋಗಿಗಳು ಹಾಗೂ ರೋಗಿಗಳ ಜೊತೆಗೆ ಬಂದಿರುವಂತ ಜನರು ಭಯಭೀತರಾಗಿರುವಂತ ಸ್ಥಿತಿ ಕಂಡು ಬಂದಿದೆ. ಭಾನುವಾರ ಮಧ್ಯಾನ ಅನೇಕ ಕೋತಿಗಳು ಆಸ್ಪತ್ರೆ ಒಳಗಡೆ ನುಗ್ಗಿ ರೋಗಿಗಳಿಗೆ ತರುವ ಹಣ್ಣು ಬಿಸ್ಕೆಟ್ ಹೀಗೆ ತಿನಿಸುಗಳನ್ನ ಕಸಿದುಕೊಂಡು ಹೋಗುತ್ತಿರುವುದು ಮತ್ತು ಆಸ್ಪತ್ರೆಯಲ್ಲಿರುವ ಕಸದ ಬುಟ್ಟಿಗಳನ್ನು ಚೆಲ್ಲಾಪಿಲ್ಲಿ ಮಾಡುತ್ತಿದ್ದು ಇದರಿಂದ ಆಸ್ಪತ್ರೆಯ ಸಿಬ್ಬಂದಿಗಳಿಗೂ ಕೂಡ ಕಿರಿಕಿರಿ ಉಂಟಾಗಿದೆ. ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ಮಂಗಗಳನ್ನು ಬೇರೆಡೆ ಸ್ಥಳಾಂತರಿಸಬೇಕು ಎಂದು ಒತ್ತಾಯ ಮಾಡುತ್ತಿದ್ದಾರೆ.