ಬೇಲೂರು: ಮನೆಯ ಹಿಂಬಾಗಿಲ ಬೀಗ ಮುರಿದು ನಗದು ಹಾಗೂ ವಿವಿಧ ಬೆಲೆಬಾಳುವ ವಸ್ತುಗಳನ್ನು ಕಳವು ಮಾಡಿರುವ ಘಟನೆ ತಾಲೂಕಿನ ದೊಡ್ಡ ಮೇದೂರು ಗ್ರಾಮದಲ್ಲಿ ನಡೆದಿದೆ.ಗ್ರಾಮದ ಸ್ವಾಮೀಗೌಡ ಎಂಬುವರು ಸೆ.24 ರಂದು ಟಿಎಪಿಸಿಎಂಎಸ್ ಚುನಾವಣೆ ಇದ್ದುದರಿಂದ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿರುವ ಕಚೇರಿಗೆ ಬಂದು ಇಡೀ ದಿನ ಚುನಾವಣಾ ಪ್ರಚಾರ ಮಾಡಿ ಮನೆಗೆ ಬಂದಿದ್ದರು.ಇದೇ ವೇಳೆ ಸೈಟಿನ ವ್ಯವಹಾರಕ್ಕೆಂದು ಇಟ್ಟುಕೊಂಡಿದ್ದ 4.50 ಲಕ್ಷ ರೂ. ಹಣವನ್ನು ಕಾರಿನ ಒಳಗಡೆ ಬ್ಯಾಗಿನಲ್ಲಿಟ್ಟು ಕಾರು ಲಾಕ್ ಮಾಡಿ ಮನೆಯ ಒಳಗೆ ಹೋಗಿ, ತಮ್ಮ ಬಳಿ ಇದ್ದ 70 ಸಾವಿರ ಹಣ, ಸ್ಮಾಮ್ ಸಂಗ್ ಕಂಪನಿಯ 2 ಮೊಬೈಲ್, ಅದೇ ಕಂಪನಿಯ ವಾಚ್‌ನ್ನು ಸೋಫಾ ಮೇಲಿಟ್ಟು ರೂಂನಲ್ಲಿ ಮಲಗಿದ್ದರು.