ದಾವಣಗೆರೆ ನಗರ ದೇವತೆ ಶ್ರೀ ದುರ್ಗಾಂಭಿಕಾ ದೇವಿ ದೇವಸ್ಥಾನ ಟ್ರಸ್ಟ್ ವತಿಯಿಂದ ಆಯೋಜಿಸಿರುವ 2025ನೇ ಸಾಲಿನ ದಸರಾ ಮಹೋತ್ಸವ ಆಚರಣೆ ಅಂಗವಾಗಿ ಶ್ರೀ ದುರ್ಗಾಂಭಿಕಾ ದೇವಿ ಪ್ರಸಾದ ನಿಲಯದಲ್ಲಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ ಅವರ ಅಧ್ಯಕ್ಷತೆಯಲ್ಲಿ ಶನಿವಾರ ಸಂಜೆ 6 ಗಂಟೆಗೆ ಪೂರ್ವಭಾವಿ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಸಭೆಯನು ಉದ್ದೇಶಿಸಿ ಮಾತನಾಡಿದ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರು, ನಾಡ ಹಬ್ಬವಾದ ದಸರಾವನ್ನು ಸಡಗರ, ಸಂಭ್ರಮ, ವಿಜೃಂಭಣೆಯಿAದ ಆಚರಿಸುವಂತೆ ಸೂಚನೆ ನೀಡಿದರು. ದಸರಾ ಹಬ್ಬವೆಂದರೆ ಕೇವಲ ಬರಿ ಹಬ್ಬವಲ್ಲ. ನಮ್ಮ ನಾಡ ಸಂಸ್ಕöÈತಿ ಹಾಗೂ ಹೆಮ್ಮೆಯ ಗರಿ, ಐತಿಹಾಸಿಕ ಪರಂಪರೆಯುಳ್ಳ ಹಬ್ಬವನ್ನು ನಮ್ಮ ಜಿಲ್ಲೆಯಲ್ಲಿಯು ನಗರದೇವತೆಯ ಆಶಿರ್ವಾದದಿಂದ ವಿಜೃಂಭೆಯಿAದ ಆಚರಣೆ ಮಾಡೋಣ ಎಂದರು.