ಹನೂರು ತಾಲೂಕಿನ ಪ್ರಸಿದ್ಧ ಯಾತ್ರಾ ಸ್ಥಳವಾದ ಮಲೆಮಹದೇಶ್ವರ ಬೆಟ್ಟದಲ್ಲಿ ಬೆನಕನ ಅಮಾವಾಸ್ಯೆ ಪ್ರಯುಕ್ತ ವಿಶೇಷ ಪೂಜಾ ಕೈಂಕಾರ್ಯಗಳು ವಿಜೃಂಭಣೆಯಿಂದ ನಡೆಯಿತು. ಮಾದಪ್ಪನ ಸನ್ನಿದಿಧಿಗೆ ಆಗಮಿಸಿದ್ದ ಸಹಸ್ರಾರು ಸಂಖ್ಯೆ ಭಕ್ತರು ಸರಥಿ ಸಾಲಿನಲ್ಲಿ ನಿಂತು ಮಹದೇಶ್ವರನ ದರ್ಶನ ಪಡೆದು ಪುನೀತರಾದರು, ನಂತರ ಉತ್ಸವಗಳಾದ ಬಸವ ವಾಹನ, ಹುಲಿ ವಾಹನ, ರುದ್ರಾಕ್ಷಿ ಮಂಟೋಪತ್ರೋವ, ಸೇರಿದಂತೆ ವಿವಿಧ ಉತ್ಸವಗಳಲ್ಲಿಪಾಲ್ಗೊಂಡು ಉಘೇ ಮಾದಪ್ಪನ ಉಘೇ ಮಾದಪ್ಪನ ಎಂಬ ಘೋಷಣೆಗಳೊಂದಿಗೆ ಜೈಕಾರಗಳನ್ನು ಹಾಕಿದರು. ಶ್ರಾವಣ ಮಾಸ ಮುಕ್ತಾಯ ಹಾಗೂ ಬೆನಕನ ಅಮಾವ್ಯಾಸೆ ಹಿನ್ನೆಲೆಯಲ್ಲಿಜರುಗಲಿರುವ ಈ ವಿಶೇಷ ಪೂಜಾ ಕಾರ್ಯಗಳನ್ನು ಕಣ್ಣುಂಬಿಕೊಳ್ಳಲು ರಾಜ್ಯದ ನಾನಾ ಭಾಗಗಳಿಂದ ಮಾದಪ್ಪನ ಭಕ್ತರು ಸಾವಿರಾರು ಸಂಖ್ಯೆಯಲ್ಲಿಪಾಲ್ಗೊಂಡಿದ್ದರು.