ಚಾಮರಾಜನಗರ ತಾಲೂಕಿನ ಅಮಚವಾಡಿ ಗ್ರಾಮದ ಬಳಿ ಚನ್ನಪ್ಪನಪುರ ಗ್ರಾಮದ ರಸ್ತೆಯಲ್ಲಿರುವ ಹೆಬ್ಬಾಳ್ ಶನೆರಶ್ವರ ಸ್ವಾಮಿ ದೇವಸ್ಥಾನದಲ್ಲಿ ವಿಜೃಂಭಣೆಯಿಂದ ಕೊಂಡೊತ್ಸವ ಜರುಗಿತು. ಶ್ರಾವಣ ಮಾಸದ 19 ನೇ ವರ್ಷದ ಪ್ರಯುಕ್ತ ಶನೇಶ್ವರಸ್ವಾಮಿ ಕೊಂಡೊತ್ಸವ ಹಾಗೂ ಜಾತ್ರಾ ಮಹೋತ್ಸವ ಹಿನ್ನೆಲೆ ಹೆಬ್ಬಾಳ್ ಶನೇಶ್ವರಸ್ವಾಮಿ ದೇವಸ್ಥಾನಕ್ಕೆ ವಿವಿಧ ಹೂಗಳಿಂದ ಹಾಗೂ ವಿದ್ಯುತ್ ದೀಪಗಳಿಂದ ಅಲಂಕರ ಮಾಡಲಾಗಿತ್ತು. ಇನ್ನೂ ದೇವಸ್ಥಾನದ ಮುಂದೆ ಸಿದ್ದಪಡಿಸಿದ ಕೊಂಡವನ್ನು ಅರ್ಚಕರು ಹಾಯ್ದುರು. ಈ ವೇಳೆ ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು.