ವಿಜಯಪುರ ನಗರದಲ್ಲಿ ದಲಿತ ಸಂಘಟನೆ ವತಿಯಿಂದ ಹಮ್ಮಿಕೊಂಡಿದ್ದ ಸತ್ಯಶೋಧಕ ಅಣ್ಣಾ ಬಾವು ಸಾಟೆ ಜಯಂತಿ ಕಾರ್ಯಕ್ರಮವನ್ನು ಸೋಮವಾರ ಸಾಯಂಕಾಲ 6ಗಂಟೆ ಸುಮಾರಿಗೆ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಉದ್ಘಾಟಿಸಿದರು ಈ ಸಂದರ್ಭದಲ್ಲಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ, ಅಣ್ಣಾ ಬಾವು ಸಾಟೆ ದೀನದಲಿತರ ಧ್ವನಿಯಾಗಿ ಹೋರಾಟ ಮಾಡುವ ಮೂಲಕ ದಲಿತರ ಧ್ವನಿಯಾಗಿದ್ದರು, ಅವರ ಹೋರಾಟದ ಮನೋಭಾವ ನಾವೆಲ್ಲರೂ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ದಲಿತ ಮುಖಂಡರುಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.