ಚುನಾವಣಾ ಅಧಿಕಾರಿಯನ್ನು ದೂಷಿಸಿದ ಮಾಜಿ ಅಧ್ಯಕ್ಷ ಬಾಬು ;ದಲಸನೂರು ಗ್ರಾ ಪಂಯಲ್ಲಿ ಘಟನೆ ನಾಮ ಪತ್ರ ಸಲ್ಲಿಸಲು ಸರಿಯಾದ ಸಮಯಕ್ಕೆ ಬಾರಲಾಗದೆ ಚುನಾವಣಾ ಕರ್ತವ್ಯದಲ್ಲಿ ನಿಮಿತ್ತವಾಗಿದ್ದ ಅಧಿಕಾರಿಯನ್ನು ದಲಸನೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ವಿನಃ ಕಾರಣ ಏಕವಚನದಲ್ಲಿ ದೂಷಿಸಿರುವ ಪ್ರಸಂಗ ನಡೆಯಿತು. ಶ್ರೀನಿವಾಸಪುರ ತಾಲ್ಲೂಕಿನ ದಲಸನೂರು ಗ್ರಾಮ ಪಂಚಾಯಿತಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಸ್ಥಾನ ತೆರವಾಗಿದ್ದ ಹಿನ್ನೆಲೆ ಜಿಲ್ಲಾಧಿಕಾರಿಗಳ ಸೂಚನೆಯಂತೆ ಬುಧವಾರ ಚುನಾವಣೆ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿದ್ದು, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಿದ್ದು ಈ ಎರಡೂ ಸ್ಥಾನಗಳಿಗೆ ಅಭ್ಯರ್ಥಿಗ