ಮೇಯಲು ಬಿಟ್ಟಿದ್ದ ವೇಳೆ ಹಸು ವನ್ಯಜೀವಿ ದಾಳಿಗೆ ಬಲಿಯಾಗಿರುವ ಘಟನೆ ಚಾಮರಾಜನಗರ ತಾಲೂಕಿನ ಹಿರೇಬೇಗೂರಲ್ಲಿ ಸೋಮವಾರ ನಡೆದಿದೆ. ಹಿರೇಬೇಗೂರು ಗ್ರಾಮದ ಚೆನ್ನೂರಪ್ಪ @ ಮಹಾದೇವಪ್ಪ ಎಂಬವರ ಹಸು ಮೃತಪಟ್ಟಿದೆ. ಕನಕಗಿರಿ ಬೆಟ್ಟದ ಹಿಂಭಾಗ 4 ಹಸುಗಳನ್ನು ಮೇಯಲು ಬಿಟ್ಟಿದ್ದ ವೇಳೆ ಹುಲಿ ದಾಳಿ ನಡೆಸಿ ಒಂದು ಹಸುವನ್ನು ಅರ್ಧ ಕಿಮೀ ಅಧಿಕ ದೂರ ಎಳೆದೊಯ್ದು ತಿಂದು ಹಾಕಿದೆ, ಅರಣ್ಯ ಇಲಾಖೆಗೆ ಸಾಕಷ್ಟು ಬಾರಿ ದೂರು ಕೊಟ್ಟರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ರೈತ ಚೆನ್ನೂರಪ್ಪ, ಮಧು ಚೇರ್ಮನ್ ಕಿಡಿಕಾರಿದ್ದಾರೆ. ಚಾಮರಾಜನಗರ ಬಫರ್ ವಲಯದಲ್ಲಿ ಈ ಹಸು ಸಾವು ಪ್ರಕರಣ ನಡೆದಿದೆ.