ದೇಶದಲ್ಲೆಡೆ ಇಂದು ಗಣೇಶ ಹಬ್ಬವನ್ನ ಅತ್ಯಂತ ಸಡಗರ ಸಂಭ್ರಮದಿಂದ ಆಚರಣೆ ಮಾಡಲಾಗುತ್ತಿದೆ ಅದರಂತೆ ಕೋಲಾರ ಜಿಲ್ಲೆಯ ಪುರಾಣ ಪ್ರಸಿದ್ಧ ಮುಳಬಾಗಿಲು ತಾಲೂಕಿನ ಕುರುಡುಮಲೆ ವಿನಾಯಕನ ಸನ್ನಿಧಿಯಲ್ಲೂ ಹಬ್ಬ ಸಂಭ್ರಮ ಕಳೆಕಟ್ಟಿದೆ. ಪೌರಾಣಿಕ ಹಿನ್ನಲೆ ಇರುವ ಕುರುಡುಮಲೆ ವಿನಾಯಕನ ದೇವಸ್ಥಾನಕ್ಕೆ ರಾಜಕೀಯವಾಗಿಯೂ ಸಾಕಷ್ಟು ಪ್ರಾಮುಖ್ಯತೆ ಪಡೆದಿದೆ. ಏಕಶಿಲಾ ಸಾಲಿಗ್ರಾಮ ಮೂರ್ತಿ ಗಣೇಶನನ್ನು ವಿಶೇಷವಾಗಿ ಅಲಂಕರಿಸಲಾಗಿದ್ದು, ಕುರುಡುಮಲೆ ವಿನಾಯಕನ ದರ್ಶನಕ್ಕೆ ಬುಧವಾರ ಗಣಪತಿ ಹಬ್ಬದ ಪ್ರಯುಕ್ತ ಜನರ ದಂಡು ಆಗಮಿಸಿತ್ತು. ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕು ಕುರುಡುಮಲೆ ವಿನಾಯಕನ ದರ್ಶನಕ್ಕೆ ಬುಧವಾರ ಬೆಳಿಗ್ಗೆ ಯಿಂದ ಸರತಿ ಸಾಲಿನಲ್ಲಿ ನಿಂತು ಭಕ್ತರು ದರ್ಶನ ಪಡೆದು ಪುನೀತರಾದ್ರು.