ರಾಯಚೂರು ಸಮೀಪದ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ದೇಶದಲ್ಲಿ ರಾಹುಗ್ರಸ್ತ ರಕ್ತ ಚಂದ್ರ ಗ್ರಹಣ ನಡೆಯುತ್ತಿರುವ ಹಿನ್ನೆಲೆಯಲ್ಲಿ ಭಾನುವಾರ ಮಧ್ಯಾನವೇ ರಾಯರ ಮಠದಲ್ಲಿ ತೀರ್ಥ ಪ್ರಸಾದ ಪೂಜಾ ಕಾರ್ಯಕ್ರಮಗಳನ್ನು ಬಂದ್ ಮಾಡಲಾಗಿದೆ. ಮಂತ್ರಾಲಯದ ಪೀಠಾಧಿಪತಿಗಳಾದ ಶುಭೋದಯ ಅನಂತ ಚತುರ್ದಶಿಯ ಶುಭ ಸಂವತ್ಸರದ ಹಿನ್ನೆಲೆ ಮೂಲ ರಾಮದೇವರಲಿ ವಿಶೇಷ ಪೂಜೆ ನಂತರ ಶ್ರೀ ಅನಂತ ಪದ್ಮನಾಭ ವ್ರತ ವಿಧಿಗಳನ್ನು ಪೂರೈಸಿ ಮಠದ ಅರ್ಚಕರಿಗೆ ಸಮರ್ಪಿಸಿ ಆಚರಿಸಲಾಯಿತು. ಮಧ್ಯಾಹ್ನದಿಂದ ಉತ್ಸವ ಸೇವೆಗಳು ಸಂಸ್ಥಾನ ಪೂಜೆ ಪಾದಪೂಜೆ ಪ್ರಸಾದವನ್ನು ಕೂಡ ಮುಕ್ತಾಯಗೊಳಿಸಲಾಗಿದೆ. ರಾತ್ರಿ ವೇಳೆ ನಡೆಯುವ ಎಲ್ಲಾ ಉತ್ಸವಗಳು ಹಗಲಿನಲ್ಲಿಯೇ ನಡೆಸಲಾಯಿತು.