ಕುಂದಾಪುರ ಪೊಲೀಸ್ ಉಪನಿರೀಕ್ಷಕ ನಂಜಾ ನಾಯಕ್ ನೇತೃತ್ವದಲ್ಲಿ ಪಟ್ಟಣದ ಪಂಚಗಂಗಾವಳಿ ಹೊಳೆಯ ಬದಿಯ ಸಾರ್ವಜನಿಕ ಸ್ಥಳದಲ್ಲಿ ಅಂದರ್ ಬಾಹರ್ ಜುಗಾರಿ ಆಟ ಆಡುತ್ತಿದ್ದ ನಾಲ್ಕು ಮಂದಿಯನ್ನು ಬಂಧಿಸಲಾಗಿದೆ. ಅಣ್ಣಯ್ಯ ಖರ್ವಿ, ಸುರೇಶ್ ನಾಯಕ್, ದಯಾನಂದ ಮತ್ತು ಉಬೇದುಲ್ಲಾ ಎಂಬುವರನ್ನು ಬಂಧಿಸಿದ್ದಾರೆ ಬಂದಿತರಿಂದ 3150 ರೂ ನಗದು, ನಾಲ್ಕು ಮೊಬೈಲ್ ಫೋನ್ಗಳು ಮತ್ತು ಬೈಕ್ ಅನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದುಬಂದಿದೆ.