*ಸರ್ಕಾರಿ ಶಾಲೆ ಉಳಿಸಲು ಶಿಕ್ಷಕನ ಅವತಾರ ತಾಳಿದ ಗಣಪ* ಚಿತ್ರದುರ್ಗ:-ನಾಡಿನಲ್ಲೆಡೆ ಗಣೇಶ ಚತುರ್ಥಿಯ ಸಂಭ್ರಮ ಮನೆ ಮಾಡಿದೆ, ಗಣೇಶ ಹಬ್ಬವನ್ನು ಧಾರ್ಮಿಕ ನಂಬಿಕೆಗಳಿಂದ ಶ್ರದ್ದಾ ಭಕ್ತಿಯಿಂದ ಪೂಜೆ ಮಾಡಲಾಗುತ್ತಿದೆ, ಈ ಹಬ್ಬದ ಸಮಯದಲ್ಲಂತೂ ಗಣಪತಿ ಹಬ್ಬದ ವೇದಿಕೆಗಳು ಜನರಿಗೆ ವರ್ಣ ರಂಜಿತ ಮನೋರಂಜನೆ ನೀಡುವ ವೇದಿಕೆಗಳಾಗಿರುತ್ತವೆ. ಆದರೆ ಇದಕ್ಕೆ ವಿಭಿನ್ನ ಎನ್ನುವಂತೆ ಸರ್ಕಾರಿ ಶಾಲೆಯನ್ನು ಉಳಿಸುವ ಅಭಿಯಾನದ ಭಾಗವಾಗಿ ಸರ್ಕಾರಿ ಶಾಲೆಯ ಬಗ್ಗೆ ಮಕ್ಕಳಿಗೆ ಮತ್ತು ಪೋಷಕರಿಗೆ ಗುಣಾತ್ಮಕ ಸಂದೇಶ ಸಾರುವ ನಿಟ್ಟಿನಲ್ಲಿ ಗಣೇಶನು ಮಕ್ಕಳಿಗೆ ಪಾಠ ಹೇಳಿಕೊಡುವ ಶಿಕ್ಷಕನಾಗಿ ಅವತರಿಸಿದ್ದಾನೆ.