ಮಳವಳ್ಳಿ : ನಾಡಿನ ಇತಿಹಾಸ ಪ್ರಸಿದ್ಧ ಮಳವಳ್ಳಿ ತಾಲ್ಲೂಕಿನ ಬಿ ಜಿ ಪುರದ ಶ್ರೀ ಮಂಟೇಸ್ವಾಮಿ ಮಠದಲ್ಲಿ ಬುಧವಾರ ವಿಘ್ನ ನಿವಾ ರಕ ಶ್ರೀ ಗೌರಿ ಗಣೇಶ ಚತುರ್ಥಿ ಯನ್ನು ಸಂಪ್ರದಾಯಬದ್ಧವಾಗಿ ಸಡಗರ ಸಂಭ್ರಮದಿಂದ ಆಚರಿಸ ಲಾಯಿತು. ಶ್ರೀ ಗೌರಿ ಚತುರ್ಥಿ ಅಂಗವಾಗಿ ಮಂಗಳವಾರ ಪೀಠಾಧೀಶರಾದ ಶ್ರೀ ಜ್ಞಾನನಂದ ಚೆನ್ನರಾಜೇಅರಸ್ ಅವರ ನೇತೃತ್ವದಲ್ಲಿ ಗ್ರಾಮದ ತೋಪಿನಲ್ಲ ಗೌರಮ್ಮನ ಮೂರ್ತಿಗೆ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಿ ಮಹಾ ಮಂಗಳಾರತಿ ಪಲ್ಲಕ್ಕಿಯಲ್ಲಿ ಗೌರಮ್ಮ ನನ್ನು ಇರಿಸಿ ರಾಜಬೀದಿಯಲ್ಲಿ ಮೆರವಣಿಗೆ ಮೂಲಕ ಮಠಕ್ಕೆ ತರಲಾಯಿತು. ನಂತರ ಮಠದ ಆವರಣದಲ್ಲಿರುವ ಗೌರಿ ಅಜಾರದಲ್ಲಿ ಗೌರಮ್ಮನ ಪ್ರತಿಷ್ಠಾಪನೆ ಮಾಡಿ ಬಾಗಿನ ಅರ್ಪಿಸಿ ಪೂಜೆ ಸಲ್ಲಿಸಲಾಯಿತು.