ದಾಂಡೇಲಿ : ನಗರದ ಶ್ರೀ. ಶಿವ ಪ್ರತಿಷ್ಠಾನ ಹಿಂದುಸ್ಥಾನ ಸಮಿತಿ ಇದರ ಆಶ್ರಯದಡಿ ಪ್ರತಿ ವರ್ಷದಂತೆ ಈ ವರ್ಷವೂ ಶ್ರೀ ದುರ್ಗಾಮಾತಾ ದೌಡ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಸೆ.22 ರಿಂದ ಆರಂಭಗೊಂಡ ಈ ದುರ್ಗಾ ಮಾತಾ ದೌಡ್ ಕಾರ್ಯಕ್ರಮದಲ್ಲಿ ಹಿಂದೆಂದಿಗಿಂತಲೂ ಈ ಬಾರಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂ ಧರ್ಮ ಬಾಂಧವರು ಭಾಗವಹಿಸುತ್ತಿರುವುದು ವಿಶೇಷವಾಗಿದೆ. ಪ್ರತಿದಿನವೂ ನಿಗದಿಪಡಿಸಿದ ಪ್ರದೇಶದಲ್ಲಿ ದುರ್ಗಾ ದೌಡ್ ಮೆರವಣಿಗೆ ಸಂಚರಿಸುತ್ತಿದ್ದು, ದುರ್ಗಾ ದೌಡ್ ಮೆರವಣಿಗೆ ಬರುವ ಮುನ್ನವೇ ತಮ್ಮ ತಮ್ಮ ಮನೆಗಳ ಮುಂಭಾಗದ ರಸ್ತೆಗಳನ್ನು ಸ್ವಚ್ಛಗೊಳಿಸಿ ರಂಗೋಲಿಯನ್ನು ಹಾಕಿ ದುರ್ಗಾದೌಡ್ ಮೆರವಣಿಗೆಗೆ ಭಕ್ತಿ ಪೂರ್ವಕ ಸ್ವಾಗತ ಕೋರುವ ಮೂಲಕ ಹಿಂದೂ ಧರ್ಮ ಬಾಂಧವರು ತಮ್ಮ ಭಕ್ತಿಯನ್ನು ಸಾದರ ಪಡಿಸುತ್ತಿದ್ದಾರೆ.