ಮಂಡ್ಯ ತಾಲ್ಲೂಕಿನ ಬೂದನೂರು ಗ್ರಾಮ ಪಂಚಾಯತಿಯಲ್ಲಿ ವಿಕಲಚೇತನರ ಶೌಚಾಲಯ ಕಾಣೆಯಾಗಿರುವ ಬಗ್ಗೆ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಗುರುವಾರ ಸಂಜೆ 6 ಗಂಟೆಯಲ್ಲಿ ನಗರದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಜಮಾವಣೆಗೊಂಡ ಪರಿಶಿಷ್ಟ ಜಾತಿಯ ಮುಖಂಡರು, ಸ್ವಂತಮನೆ ನಮ್ಮಹಕ್ಕು ಹೋರಾಟ ಸಮಿತಿ ಸದಸ್ಯರು ಶಾಲೆಯ ಹಳೇ ವಿದ್ಯಾರ್ಥಿ ಶಿವರಾಜು ಎಂಬುವವರ ದೂರು ನೀಡಿ ಸೂಕ್ತ ಕ್ರಮ ವಹಿಸುವಂತೆ ಒತ್ತಾಯಿಸಿತು. 15ನೇ ಹಣಕಾಸು ಯೋಜನೆ ಅನುದಾನ 65 ಸಾವಿರ ರೂ ವೆಚ್ಚದಲ್ಲಿ ಮೊದಲು ವಿಕಲಚೇತನರ ಶೌಚಾಲಯ ನಿರ್ಮಿಸಿದ ದಾಖಲೆ ಸೃಷ್ಟಿಸಿ ಬಳಿಕ ಗಂಡು ಹೆಣ್ಣು ಮಕ್ಕಳ ಶೌಚಾಲಯದ ದುರಸ್ತಿಗೆ ಸುಸಜ್ಜಿತ ಶೌಚಾಲಯ ಕಟ್ಟಡ ಕೆಡವಿ ಒಂದು ಲಕ್ಷ ರೂ ಹಣದಲ್ಲಿ ಹೊಸ ಶೌಚಾಲಯ ನಿರ್ಮಿಸಿ ಅಕ್ರಮ ಎಸಗಲಾಗಿದೆ ಎಂದು ಆರೋಪಿಸಿದರು