ಕ್ಷುಲಕ ಕಾರಣಕ್ಕೆ ಯುವಕನ ಕೊಲೆ ನಡೆದಿದೆ ಎಂದು ಶಿವಮೊಗ್ಗ ನಗರದಲ್ಲಿ ಎಸ್ಪಿ ಮಿಥುನ್ ಕುಮಾರ್ ಹೇಳಿದ್ದಾರೆ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಿನ್ನೆ ರಾತ್ರಿ ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ ಜನಾರ್ಧನ್ ಎಂಬ ಯುವಕ ಮೃತಪಟ್ಟಿದ್ದಾನೆ ಜನಾರ್ಧನ ಸ್ವಂತ ದೊಡ್ಡಪ್ಪನ ಮಗ ಹನುಮಂತ ಈ ಪ್ರಕರಣದ ಮುಖ್ಯ ಆರೋಪಿಯಾಗಿದ್ದಾನೆ ಮೃತ ಜನಾರ್ಧನ್ ಹೋಟೆಲ್ ನಿಸರ್ಗದಲ್ಲಿ ಕುಕ್ ಆಗಿದ್ದು ನಿನ್ನೆ ರಾತ್ರಿ ಒಂಬತ್ತು ಮೂವತ್ತರ ಸುಮಾರಿಗೆ ಇಲ್ಲಿಗೆ ಬಂದಂತಹ ಹನುಮಂತ ಕೆಳಗೆ ಕರೆಸಿಕೊಂಡಿದ್ದ ಬಂದ ಕೂಡಲೇ ಆತನಿಗೆ ಚಾಕುವಿನಿಂದ ಇರಿದಿದ್ದಾನೆ ಗಾಯಗೊಂಡಿದ್ದ ಜನಾರ್ಧನ್ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗಿನ ಜಾವ ಮೃತಪಟ್ಟಿದ್ದಾನೆ ಎಂದರು