ಮೊಳಕಾಲ್ಮುರು: ಪಟ್ಟಣದ ಬಿಇಓ ಕಚೇರಿ ಆವರಣದಲ್ಲಿ ಬುಧವಾರ ಬೆಳಿಗ್ಗೆ ಮಹಾಗಣಪತಿ ಸೇವಾ ಸಮಿತಿಯಿಂದ 58ನೇ ವರ್ಷದ ಗಣೇಶ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಿತು. ಗಣೇಶನನ್ನು ಪ್ರತಿಷ್ಠಾಪಿಸಿ ಕಳಶ ತೀರ್ಥ ಸಿಂಪಡಿಸುವ ಮೂಲಕ ಪೂಜೆಯನ್ನು ಪ್ರಾರಂಭಿಸಲಾಯಿತು. ಗಣಪತಿಗೆ ಧೂಪ ಸಮರ್ಪಿಸಿ, ಅಷ್ಟೋತ್ತರ ಜಪಿಸಿ, ದೀಪ ಬೆಳಗಿಸಿ, ಮೋದಕ ಸೇರಿದಂತೆ ಅನೇಕ ಭಕ್ಷ್ಯಗಳು, ಫಲ ಪುಷ್ಪಗಳನ್ನ ಅರ್ಪಿಸಿ ಪೂಜೆ ಮಾಡಲಾಯಿತು. ಗಣೇಶನಿಗೆ ಪೂಜೆ ಸಂದರ್ಭದಲ್ಲಿ ಗರಿಕೆಯ ಹಾಗೂ ಕುಂಕುಮ ಅರ್ಚನೆಯನ್ನು ಮಾಡಿ ಬಳಿಕ ಏಕಾರತಿ ಮಾಡಲಾಯಿತು.