ಗಣೇಶನ ವಿಸರ್ಜನೆಗಾಗಿ ಮೆರವಣೆಗೆಯಲ್ಲಿ ಡಿಜೆ ಸೌಂಡ್ ಎಫೆಕ್ಟ್ ನಿಂದಾಗಿ 30 ವರ್ಷದ ಯುವಕ ಹೃದಯಾಘಾತದಿಂದ ಮೃತಪಟ್ಟ ಘಟನೆ ಸಿರವಾರ ಪಟ್ಟಣದಲ್ಲಿ ಮಂಗಳವಾರ ಬೆಳಗಿನ ಜಾವ ಜರುಗಿದೆ. ಮೃತ ಯುವಕ ಹನುಮೇಶ ಕಟ್ಟಿಮನಿ (ಬೋಟಾ) ಈತ ಸೋಮವಾರ ರಾತ್ರಿಯಿಂದ ತಮ್ಮ 15ನೇ ವಾರ್ಡಿನಲ್ಲಿ ಪ್ರತಿಷ್ಠಾನೆ ಮಾಡಲಾಗಿದ್ದ ಗಣೇಶನ ವಿಸರ್ಜನೆಗಾಗಿ ಡಿಜೆ ಹಚ್ಚಲಾಗಿತ್ತು ರಾತ್ರಿ ಇಡೀ ಡಿಜೆ ಸೌಂಡಗೆ ಡ್ಯಾನ್ಸ್ ಮಾಡುತ್ತಿದ್ದ ಇನ್ನೂ ಗಣೇಶನ ವಿಸರ್ಜನೆಯಾಗಿರಲಿಲ್ಲ ಈ ಯುವಕ ಬೆಳಗಿನ ಜಾವ 6 ಗಂಟೆಗೆ ಮನೆಗೆ ಹೋಗಿ ಮಲಗಿದ್ದು ಹೃದಯಾಘಾತ ಸಂಭವಿಸಿ ಮೃತಪಟ್ಟಿದ್ದಾನೆ ಎಂದು ಕುಟುಂಬ ಮೂಲಗಳಿಂದ ತಿಳಿದು ಬಂದಿದೆ. ಪಟ್ಟಣದಲ್ಲಿ ಎಲ್ಲಾರಿಗೂ ಆತ್ಮೀಯತೆಯಿಂದ ಇದ್ದ ಹನುಮೇಶ ಕಟ್ಟಿಮನಿ ಅವರು ಹಠಾತ್ ಹೃದಯಾಘಾತದಿಂ