Download Now Banner

This browser does not support the video element.

ಹನೂರು: ಕುರಟ್ಟಿಹೊಸೂರಿನಲ್ಲಿ ಚರ್ಮಗಂಟು ರೋಗದಿಂದ ಮತ್ತೊಂದು ಹಸು ಸಾವು – ಗ್ರಾಮದಲ್ಲಿ ಆತಂಕದ ವಾತಾವರಣ

Hanur, Chamarajnagar | Sep 13, 2025
ಹನೂರು: ತಾಲೂಕಿನ ಕುರಟ್ಟಿಹೊಸೂರು ಗ್ರಾಮದಲ್ಲಿ ಚರ್ಮಗಂಟು ರೋಗದಿಂದ ಮತ್ತೊಂದು ಹಸು ಸಾವನ್ನಪ್ಪಿರುವ ಘಟನೆ ಶನಿವಾರ ವರದಿಯಾಗಿದೆ. ಈ ಮೂಲಕ ಗ್ರಾಮದಲ್ಲಿ ಸಾವು ಸಂಭವಿಸಿದ ಜಾನುವಾರುಗಳ ಸಂಖ್ಯೆ 6ಕ್ಕೆ ಏರಿಕೆಯಾಗಿದೆ.ಗ್ರಾಮದ ಪುಟ್ಟ ಎಂಬ ರೈತನಿಗೆ ಸೇರಿದ ಹಸು ಚರ್ಮಗಂಟು ರೋಗದಿಂದ ಸಾವನ್ನಪ್ಪಿದೆ. ಇದಕ್ಕೂ ಮುನ್ನ, ಗುರುವಾರದಂದು 5 ಹಸುಗಳು ಇದೇ ರೋಗದಿಂದ ಮೃತಪಟ್ಟಿದ್ದು, ಈ ಘಟನೆಯು ಗ್ರಾಮಸ್ಥರಲ್ಲಿ ಭಯ ಹಾಗೂ ಆತಂಕವನ್ನುಂಟು ಮಾಡಿದೆ. ಈ ವೇಳೆ ಗ್ರಾಮಸ್ಥರು ಮಾತನಾಡಿ ಕಳೆದ ಕೆಲವು ದಿನಗಳಿಂದ ಚರ್ಮಗಂಟು ರೋಗವು ಹರಡುತ್ತಿರುವ ಹಿನ್ನೆಲೆಯಲ್ಲಿ ಗ್ರಾಮದಲ್ಲಿನ ಉಳಿದ ಜಾನುವಾರುಗಳ ರಕ್ಷಣೆ ಅತಿ ಅವಶ್ಯಕವಾಗಿದೆ.
Read More News
T & CPrivacy PolicyContact Us