ಬೇಲೂರು: ಜಮೀನಿನ ಶೆಡ್ ನಲ್ಲಿ ಇರಿಸಲಾಗಿದ್ದ 15 ಕುರಿಗಳು ಕಳವಾಗಿರುವ ಪ್ರಕರಣ ನಗರದ ಎಂ. ಹುಣಸೆಕೆರೆ ಕೊಪ್ಪಲು ಗ್ರಾಮದಲ್ಲಿ ನಡೆದಿದೆ.ಗ್ರಾಮದ ಸ.ನಂ. 130 ರಲ್ಲಿರುವ ತಮ್ಮ ಜಮೀನಿನಲ್ಲಿ ಶೆಡ್ ನಿರ್ಮಿಸಿಕೊಂಡು ಫಾರ್ಮ್ ಹೌಸ್ ಮಾಡಿದ್ದು, ಅದರಲ್ಲಿ 8 ತಿಂಗಳ ಹಿಂದೆ 20 ಕುರಿಮರಿಗಳನ್ನು (ಹೆಳಗಿನ ಕುರಿ ಮರಿಗಳನ್ನು) ಸಾಕಿದ್ದು, ಇವುಗಳನ್ನು ನೋಡಿಕೊಳ್ಳಲು ಕೂಲಿಕೆಲಸಕ್ಕೆಂದು ಒಬ್ಬರು ನೇಮಕ ಮಾಡಿಕೊಂಡಿದ್ದರು. ಸೆ.ಮಾಲೀಕ ಬೆಂಗಳೂರಿಗೆ ತೆರಳಿದ್ದು ಅದೇ ದಿನವೇ ಕೆಲಸ ಮಾಡುತ್ತಿದ್ದ ಚೌಡಬೋವಿ ಎಂಬಾತನು ಕೂಡ ಊರಿಗೆ ತೆರಳಿದ್ದ ವೇಳೆ ಅಪರಿಚತರು ಶೆಡ್‌ಗೆ ನುಗ್ಗಿ ಸುಮಾರು 2.20 ಲಕ್ಷ ಮೌಲ್ಯದ 15 ಕುರಿಮರಿಗಳನ್ನು ಕಳವು ಮಾಡಿದ್ದಾರೆ.