ಅನಧಿಕೃತವಾಗಿ ಪ್ಲಾಸ್ಟಿಕ್ ಮಾರಾಟ ಹಾಗೂ ದಾಸ್ತಾನು ಮಾಡುತ್ತಿದ್ದ ಗೋದಾಮುಗಳಿಗೆ ನಗರದಲ್ಲಿ ನಗರಸಭೆ ಅಧಿಕಾರಿಗಳ ಧಿಡೀರ್ ದಾಳಿ ಮುಳಬಾಗಿಲು ನಗರಸಭೆ ಪೌರಾಯುಕ್ತರಾದ ವಿ.ಶ್ರೀಧರ್ ರವರ ಆದೇಶದಂತೆ ಗುರುವಾರ ಸಂಜೆ ನಗರಸಭೆಯ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಪ್ಲಾಸ್ಟಿಕ್ ಮಾರಾಟ ಹಾಗೂ ದಾಸ್ತಾನು ಮಾಡುತ್ತಿದ್ದ ಗೋದಾಮುಗಳಿಗೆ ನಗರಸಭೆಯಲ್ಲಿ ಧಿಡೀರ್ ದಾಳಿ ನೆಡೆಸಿ, ಸುಮಾರು ೧೮೦ಕೆ.ಜಿ ಗಿಂತ ಹೆಚ್ಚು ಪ್ಲಾಸ್ಟಿಕ್ ಉತ್ಪನ್ನಗಳನ್ನು ವಶಪಡಿಸಿಕೊಳ್ಳಲಾಯಿತು, ಈ ಸಂದರ್ಭದಲ್ಲಿ ಮಾತನಾಡಿದ ಪೌರಾಯುಕ್ತರಾದ ಶ್ರೀಧರ್ ರವರು ಪ್ಲಾಸ್ಟಿಕ್ ಪರಿಸರದ ಮಹಾ ಶತ್ರು, ಏಕ ಬಳಿಕೆಯ ಪ್ಲಾಸ್ಟಿಕ್ ಉತ್ಪನ್ನಗಳನ್ನು ಮಾತ್ರ ಬಳಕೆ ಮಾಡಬೇಕು, ಪ್ಲಾಸ್ಟಿಕ್ ಈ ಪರಿಸರದಲ್ಲಿ, ಮಣ್ಣಿನಲ್ಲಿ ಕರಗದೇ ಉಳಿದು